ಎರಡು ವರ್ಷ ಹೇಗೊ ಕಳೆದು, 10 ರೂ ಹೆಚ್ಚು ಸಿಗುತ್ತೆ ಎನ್ನುವ ಆಶೆಯಿಂದ ಕಾರ್ಗಲ್ ಬಿಟ್ಟು ಸಾಗರಕ್ಕೆ ಬಂದು ಅಲ್ಲಿ ಎಕ್ಸಿಕ್ಯೂಟೀವ ಎಂಜಿನೀಯರ ನಂ : 4 ಕೌಂಟರ್ ಸರ್ವೇ ಡಿವಿಜ್‌ನ ಆಫೀಸಿನಲ್ಲಿ ಕೆಲಸಕ್ಕೆ ಸೇರಿದನು. ಜೀವನ ನಿರ್ವಹಣೆ ಇನ್ನೂ ಸುಲಭವಾಗಿರಲಿಲ್ಲ ಎರಡು ಮೂರು ಮನೆ ಪಾಠಗಳನ್ನು ಇಟ್ಟುಕೊಂಡರು. ಅನೇಕ ಕಡೆ ಒಳ್ಳೆಯ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದರು.
ಇಷ್ಟೆಲ್ಲ ಕಷ್ಟಗಳ ಮಧ್ಯೆಯೂ, ದೇವರನ್ನು ಮರೆತಿರಲಿಲ್ಲ, ಸಾಗರದಲ್ಲಿದ್ದ ಒಂದು ಅಂಜನೇಯ ಸ್ವಾಮಿ ದೇವಸ್ಥಾನಕ್ಕೆ ದಿನವೂ ಬರುತ್ತಿದ್ದರು. ತಾಯಿಯವರು ಮಗನಿಗೆ ಒಳ್ಳೆಯ ಸಂಸ್ಕಾರವನ್ನೇ ಕಲಿಸಿದ್ದರು. ಯಾರ ಆಶ್ರಯವು ಇರದೆ ಇದ್ದುದರಿಂದ, ಮಗನ ಉಪನಯನವನ್ನು ಮಾಡಲು ಹಿಂದೇಟು ಹಾಕುತ್ತಿದ್ದರು. ಈ ಮಧ್ಯದಲ್ಲಿ ಬೆಂಗಳೂರಿನ ""ಮಹಾಲೇಖಪಾಲರ"" (A.G's.Office) ಆಫೀಸಿನಲ್ಲಿ ಕೆಲಸಕ್ಕೆ ಹಾಕಿದ್ದ ಅರ್ಜಿಗೆ ಸಂದರ್ಶನಕ್ಕೆ ಕರೆ ಬಂದಿತು. ಸಂದರ್ಶನದಲ್ಲಿ ರಾಘವೇಂದ್ರರ ಭಾಷಾ ಪ್ರೌಢಿಮೆ, ಜ್ಞಾನಕ್ಕೆ ಸಂದರ್ಶನಕಾರರು ಮಾರು ಹೋಗಿ ಇವರನ್ನು ಆಯ್ಕೆ ಮಾಡಿದರು. ಇವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೇಂದ್ರ ಸರ್ಕಾರದ ಉದ್ಯೋಗ ಸಿಕ್ಕಿತ್ತು. ಜೀವನಕ್ಕೆ ಒಂದು ಭದ್ರ ನೆಲೆ ದೊರೆತಂತಾಯಿತು. ತಾಯಿಯವರನ್ನು ಕರೆದುಕೊಂಡು ಬೆಂಗಳೂರಿಗೆ ಬಂದು ಒಂದು ಚಿಕ್ಕ ಕೊಠಡಿಯನ್ನು ಬಾಡಿಗೆಗೆ ដ . 10-09-1964 ໐໐໖ ವಾಸವಾಯಿತು. ಅಕ್ಕ ಪಕ್ಕದಲ್ಲಿ ತುಂಬಾ ಒಳ್ಳೆಯ ಜನರು ಇದ್ದರು. ಅಂಥವರಲ್ಲಿ ಒಬ್ಬ ಗೃಹಸ್ಥರು ವಿಶಾಲ ಹೃದಯದಿಂದ ರಾಘವೇಂದ್ರರ ಉವನಯನವನ್ನು ತಾವೇ ನಿಂತು ಮಾಡಿದರು. ಉಪನಯನವಾದ ನಂತರ ಭಕ್ತಿಯಿಂದ ಗಾಯತ್ರಿಯ ಉಪಾಸನೆ ಮಾಡಿದರು. ಒಳೊಳ್ಳೆಯ ಸ್ವಪ್ನಗಳಾಗುತ್ತ ಬಂದವು. ಹಾಗೆಯೇ ರಾಘವೇಂದ್ರರ ಧಾರ್ಮಿಕ ಜೀವನ ಮತ್ತು ಲೌಕಿಕ ಜೀವನ ಮುಂದುವರೆಯಿತು. ಮಂತ್ರಾಲಯ ಗುರುಗಳ ಪ್ರಭಾವದಿಂದಾಗಿ ಮನೆಯಲ್ಲಿ ದಿನ ನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಾ ಹೋದವು. ಪ್ರತಿದಿನ ಬೆಳಗಿನ ಝಾವವೇ ಎದ್ದು ಸ್ನಾನ, ಸಂಧ್ಯಾವಂದನೆ, ಸುಪ್ರಭಾತಗಳ ಪಠಣ, ಶಾಲಿಗ್ರಾಮ ಪೂಜೆ ಮಾಡಲು
ಶುರು ಮಾಡಿದರು. ಇವರ ಸೇವೆಗೆ ಮೆಚ್ಚಿ ಮಂತ್ರಾಲಯ ಪ್ರಭುಗಳು ಸ್ವಪ್ನದಲ್ಲಿ ಕಾಣೆಸಿಕೊಂಡರು. ಅದರಿಂದ ದಾಸರ ನಂಬಿಕೆ ಧೃಢವಾಗುತ್ತ ಹೋದವು. ಹರಿವಾಯುಗುರುಗಳಲ್ಲಿ ಭಕ್ತಿ ಹೆಚ್ಚುತ್ತಾ ಹೋದವು. ಮಂತ್ರಾಲಯ ಪ್ರಭುಗಳು ಇವರ ವ್ಯಕ್ತಿತ್ವವನ್ನು ರೂಪಿಸುತ್ತಾ ಹೋದರು. ಇವರ ಅನೇಕ ಸಮಸ್ಯೆಗಳು ನಿವಾರಣೆಯಾದವು. ಮಂತ್ರಾಲಯ ಪ್ರಭುಗಳಲ್ಲಿ ವಿಶೇಷವಾದ ಭಕ್ತಿ ಅಭಿಮಾನಗಳು ಹುಟ್ಟಿಕೊಂಡು ನೆನೆಸಿಕೊಂಡಾಗಲೆಲ್ಲ ಮಂತ್ರಾಲಯಕ್ಕೆ ಓಡಿಹೋಗುವ ಪರಿಪಾಠವಾಯಿತು. ನಿರಂತರವಾಗಿ 10 ವರ್ಷ ಅಂದರೆ 1966ನೇ ಇಸವಿಯಿಂದ 1976 ರವರೆಗೆ ಶ್ರೀರಾಯರ, ಗುರುಗಳ ಸೇವೆ ನಿರಾತಂಕವಾಗಿ ಮುಂದುವರೆಯಿತು.