Left Om Logo

SHRI PANDHARINATHA VITTALA

Right Om Logo

ಶ್ರೀ ಪಂಡರಿನಾಥದಾಸರ ಪರಿಚಯ

Guruji Image

"ಜ್ಞಾನ ಭಕ್ತಿ ವೈರಾಗ್ಯ ಸಂಪನ್ನ | ಗಾನವಿಲೋಲ ಶ್ರೀ ಪಾಂಡುರAಗ ಭಜಕಂ |ಶ್ರೀ ನಾರದಾOಶ ಸಂಭೂತO ಮಮಗುರು | ಶ್ರೀ ಪಂಢರಿನಾಥದಾಸಾರ್ಯO ಭಜೇ ಹO ||"

ಹರಿದಾಸರು ದ್ವೆತಸಿದ್ಧಾಂತ ಸಾರವನ್ನು ಮನೆಮನೆಗೆ ಮುಟ್ಟಿಸಿದರು ಎನ್ನುವಲ್ಲಿ ಅತಿಶಯೋಕ್ತಿ ಇಲ್ಲ. ಶ್ರೀಮದಾನಂದತೀರ್ಥರ ಭಾವವನ್ನು ತಿಳಿಗನ್ನಡದಲ್ಲಿ ಮನ ಮುಟ್ಟುವಂತೆ ತಿಳಿಸಿ ಮಹೋಪಕಾರ ಮಾಡಿದ್ದಾರೆ.
ಶ್ರೀ ವಿಜಯಪ್ರಭುಗಳ ಪರಂಪರೆಯಲ್ಲಿಯೇ ಶ್ರೀ ಗುರುಗೋವಿಂದದಾಸರು ಸಾಗಿ ಬಂದು ನಂತರ ಅವರ ಶಿಷ್ಯರೂ ಆದ ಶ್ರೀ ಪಂಢರಿನಾಥದಾಸರು ದಾಸ ಪರಂಪರೆಯನ್ನು ಮುಂದುವರೆಸಿದರು.
ದಾಸರು ಬಾಲ್ಯದಲ್ಲಿ ಕಷ್ಟದಿಂದ ಬೆಳೆದು ಬಂದರು, ಆದರೆ ಅಂತರOಗದಲ್ಲಿ ಭಕ್ತಿಯ ಸೆಲೆಯೊಂದು ಆಳವಾಗಿ ಹರಿಯುತ್ತಿತ್ತು. ಮುಂದೆ ಅವರು ತಮ್ಮ ಗುರುಗಳಾದ ಶ್ರೀ ಗುರುಗೋವಿಂದದಾಸರಿOದ ಅಂಕಿತ ಹೊಂದಿ ಜನ್ಮ ಸಾರ್ಥಕ್ಯ ಹೊಂದಿದರು.
ಅನೇಕ ತೀರ್ಥಕ್ಷೇತ್ರಗಳ ದರ್ಶನ, ಅಲ್ಲಲ್ಲಿ ಶಿಷ್ಯರಿಂದ ಜೊತೆಗೂಡಿ ಭಜನೆ ಗೋಷ್ಠಿಗಳನ್ನು ನಡೆಸುತ್ತಿದ್ದರು. ಲೌಕಿಕ ಉದ್ಯೋಗದಲ್ಲಿದ್ದರೂ ಅವ್ಯಾವೂ ಇವರ ಸಾಧನೆಗೆ ಅಡ್ಡಿಯಾಗಲಿಲ್ಲ. ಸದಾ ಅದಮ್ಯ ಚೇತನ ಅವರದು. ದಾಸಕಕ್ಷೆ, ಯತಿಕಕ್ಷೆ, ದೇವತಾಕಕ್ಷೆಯಲ್ಲಿ ಅನೇಕ ಭಾವಪೂರ್ಣ ಸುಂದರ ದೇವರನಾಮಗಳನ್ನು ರಚಿಸಿದ್ದಾರೆ. ಅವರ ಶ್ರೀ ಶ್ರೀನಿವಾಸ ಕಲ್ಯಾಣ ಅತ್ಯಮೋಘವಾಗಿದೆ. ೫೯ ನುಡಿಯು ಅಡೆತಡೆ ಇಲ್ಲದೇ ಮನತುಂಬಿ ಹರಿದಿದೆ. ಇವರದು ಸರಳ ಸುಂದರ ಹಾಗೂ ಸುಲಭದಲ್ಲಿ ಹೇಳಬಹುದಾದ ಕಾವ್ಯ ಧಾರೆಗಳು, ಶ್ರೀ ಪುರಂದರದಾಸರOತೆ ಎಂದು ಹೇಳಬಹುದು. ಆರು ನೂರಕ್ಕಿಂತ ಹೆಚ್ಚು ಕೃತಿಗಳಿವೆ ಅಲ್ಲದೇ ೨೦೦ಕ್ಕೂ ಹೆಚ್ಚು ಜನರಿಗೆ ಅಂಕಿತಕೊಟ್ಟು ಆತ್ಮೋದ್ದಾರ ಮಾಡಿದ್ದಾರೆ.

ಅವರ ಸಾಹಿತ್ಯ ಸಂಕಲನಗಳು:

  • ಭಜನಕೌಸ್ತುಭ
  • ಭಜನಪಾರಿಜಾತ
  • ಭಜನಕುಸುಮಾವಳಿ
  • ಶ್ರೀನಿವಾಸ ವಿಜಯ
  • ಷಟ್ಪದಿ ಸಂದೋಹ

ಇನ್ನಿತರ ತತ್ವಸುವ್ವಾಲಿ, ಉಗಾಭೋಗಗಳು ಹೀಗೆ ವಿವಿಧ ರೂಪಗಳಲ್ಲಿಅನಾವರಣಗೊಂಡಿವೆ..

"ದಾಸರು ೭೬ ವರ್ಷತುಂಬುಜೀವನ ನಡೆಸಿ ಆದರ್ಶ ಪ್ರಾಯರಾಗಿದ್ದಾರೆ. ಪ್ರತಿದಿನ ಪ್ರತಿಕ್ಷಣ ಶ್ರೀ ಹರಿವಾಯು ಗುರುಗಳ ಸೇವೆಯಲ್ಲಿ ದಿನಕಳೆದರು."

(೧) ಅವರ ಗುರುಗಳಾದ ಶ್ರೀ ಗುರುಗೋವಿಂದದಾಸರ ಆಶೀರ್ವಾದ ವಚನದ ಮುನ್ನುಡಿಇಂತಿದೆ.
“ಚಿ|| ಟಿ.ಎಸ್.ರಾಘವೇಂದ್ರರಾವ್‌ ಈತನು ಗುರುಗಳಿಂದ ಅನುಗ್ರಹೀತನಾಗಿ ಅಂಕಿತೋಪದೇಶ ಪಡೆದು “ಪಂಢರಿನಾಥವಿಠ್ಠಲ” ದಾಸನೆಂದು ಕರೆಸಿಕೊಂಡಿದ್ದಾನೆ. ಈಗಾಗಲೇ ಈತ ಗುರುಕಕ್ಷೆ, ದೇವತಾಕಕ್ಷೆಯಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾನೆ. ಎಲ್ಲವೂ ಪ್ರಾಸಬದ್ಧವಾಗಿ ಆಕರ್ಶಕವಾಗಿ ಹಾಡುವುದಕ್ಕೆ ಸುಲಭ ಶೈಲಿಯಲ್ಲಿ ಇರುತ್ತದೆ. ಇಂತಹ ಸುಶ್ರಾವ್ಯ ಭಕ್ತಿಜನಕವಾದ ಪದ್ಯಗಳ ಪಾರಾಯಣದಿಂದ ಮನೋನೈರ್ಮಲ್ಯ ಹೊಂದಬಹುದಲ್ಲದೇ ಅಭೀಷ್ಟ ಸಿದ್ದಿಯನ್ನು ಪಡೆಯಬಹುದಾಗಿದೆ. ಗ್ರಾಹಕರು ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳುವರೆಂದೇ ನಮ್ಮಆಶಯ”

೩೦-೪-೮೧                     ಗುರುಗೋವಿಂದದಾಸರು
ಮೈಸೂರು

(೨) ಶ್ರೀ ವಿಶ್ವತ್ತೋಮತೀರ್ಥ ಶ್ರೀಪಾದರ ಸಂದೇಶ
ಶ್ರೀ ಗುರುರಾಜರ ಸಂಸ್ಥಾನದ ಮುಖ್ಯಾಭಿಮಾನಿಗಳಾದ ಶ್ರೀ ಟಿ.ಎಸ್.ರಾಘವೇಂದ್ರರಾಯರಿಗೆ ಮಾಡುವ ನಾರಾಯಣ ಸ್ಮರಣೆಗಳು.

ಶ್ರೀ ಟಿ.ಎಸ್.ರಾಘವೇಂದ್ರರಾಯರು ಹೆಸರಾಂತ ದಿವಂಗತ ಶ್ರೀ ಗುರುಗೋವಿಂದ ವಿಠಲದಾಸರಿಂದ ಅಂಕಿತ ಪಡೆದು ನೂರಾರು ಕೀರ್ತನೆಗಳನ್ನು ದಾಸಸಾಹಿತ್ಯಕ್ಕೆ ಅರ್ಪಿಸಿದ್ದಾರೆ. ಕೆಲವು ಕೀರ್ತನೆಗಳಂತೂ ಆಶುಕವಿತಾರೂಪವಾಗಿ ಅವರ ಮುಖದಿಂದ ಹೊರಹೊಮ್ಮಿವೆಎಂದು ಕೇಳಿದ್ದೇವೆ.

ವಿಶೇಷ ಕವಿತಾಪ್ರಾವೀಣ್ಯವನ್ನು ಹೊಂದಿರುವ ಶ್ರೀ ರಾಘವೇಂದ್ರರಾಯರು, ತಾವು ರಚಿಸಿದ ಕನ್ನಡ ಕೀರ್ತನ ಸಮೂಹದಿಂದ ಆಯ್ದು ‘ಭಜನಾ ಪಾರಿಜಾತ’ ಎಂಬ ಗ್ರಂಥವನ್ನು ಸಂಕಲಿಸಿ ಸುಂದರವಾದ ಈ ಗುಚ್ಛವನ್ನು ಸಜ್ಜನರಿಗೆ ನೀಡಿದ್ದಾರೆ.

ಮೂಲತಃ ಶ್ರೀ ಗುರುರಾಜರಲ್ಲಿ ವಿಶೇಷ ಭಕ್ತಿ ಅಭಿಮಾನವುಳ್ಳವರಾದ ಟಿ.ಎಸ್.ರಾಘವೇಂದ್ರರಾಯರಿಗೆ, ಶ್ರೀ ಹರಿ-ಗುರುಗಳು ಅನುಗ್ರಹ ಮಾಡಿ, ಅವರ ಕವಿತಾ ಸಾಮರ್ಥ್ಯವನ್ನು ಹೆಚ್ಚಿಸಲಿ ಹಾಗೂ ಅವರಿಂದ ಮುಂದೂ ಸಹ ಉತ್ತಮ ಕೃತಿಗಳು ಹೊರಹೊಮ್ಮಿ ಅವರಿಂದ ಮತ್ತಷ್ಟು ಇಂತಹ ಅಮೂಲ್ಯ ಸೇವೆಯನ್ನು ಕೈಗೊಳ್ಳುವಂತೆ ಕರುಣಿಸಲೆಂದು ನಾವು ಶ್ರೀಹರಿ ಗುರುಗಳನ್ನು ಪ್ರಾರ್ಥಿಸುತ್ತೇವೆ.


ಇತಿ, ನಾರಾಯಣ ಸ್ಮರಣೆಗಳು
ಶ್ರೀ ಶ್ರೀ ವಿಶ್ವೋತ್ತಮತೀರ್ಥ ಶ್ರೀಪಾದಂಗಳವರು



(೩) ಶ್ರೀ ರಮಾಕಾಂತ ವಿಠ್ಠಲ ದಾಸರ ಸಂದೇಶ

ಶ್ರೀ ಪಂಢರಿನಾಥದಾಸರು ಭಾಮಿನಿ ಷಟ್ಪದಿಯರೂಪವಾದ ಪದ್ಯಗಳಲ್ಲಿ “ಶ್ರೀನಿವಾಸ ಕಲ್ಯಾಣ” ವನ್ನು ಶ್ರವಣ ಮಾಡಿಸಿದ ಕಾಲದಲ್ಲಿ ಶ್ರೀ ಶ್ರೀನಿವಾಸನ ಕೃತ್ಯಗಳು ಕಣ್ಣಿಗೆ ಕಟ್ಟಿದಂತೆ ಭಾಸವಾಗಿ ಅಲೌಕಿಕ ಆನಂದವನ್ನುಉOಟು ಮಾಡುತ್ತವೆ. ಈ ಕಾವ್ಯವನ್ನು ಓದುವ ಮತ್ತು ಕೇಳುವ ಸಕಲ ಮುಮುಕ್ಷಗಳು ಇಂತಹ ಸುಖವನ್ನು ಅನುಭವಿಸುತ್ತಾರೆಂದು ನಾವು ದೃಢವಾಗಿ ನಂಬಿದ್ದೇವೆ. ಸಕಲ ಮಂಗಲವನ್ನು ಉಂಟು ಮಾಡಲೆಂದು ಪ್ರಾರ್ಥಿಸುತ್ತೇವೆ.


ಬೆಂಗಳೂರು
ರಮಾಕಾಂತದಾಸರು, ತಾ: ೦೨-೦೫-೧೯೮೧

(೪) ಶ್ರೀ ಲಕ್ಷ್ಮೀಶವಿಠ್ಠಲದಾಸರ ನುಡಿ

ದಾಸರಾಯರ ಆಪ್ತರಾದ ಹಾಗೂ ಶ್ರೀ ಗುರುಗೋವಿಂದ ವಿಠ್ಠಲದಾಸರ ಶಿಷ್ಯರಾದ ಶ್ರೀ ಎನ್.ಡಿ.ಕುಲಕರ್ಣಿ (ಶ್ರೀ ಲಕ್ಷ್ಮೀಶದಾಸ)ರು ಶ್ರೀ ದಾಸರನ್ನು ಕಂಡOತೆ - ಅವರು ಹರಿವಾಯು ಗುರುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಿದ್ದರು. ಹೂವಿನ ಸಮೀಪಕ್ಕೆ ಹೋದವರಿಗೆ ಅದರ (ಗಂಧದ)ಪರಿಮಳ ಅನುಭವವಾಗದೇ ಇರದು. ಅದರಂತೆ ದಾಸರು ಯಾವಾಗಲೂ ತಮ್ಮ ಸಾಧನೆಗಳಿಂದ ಆಧ್ಯಾತ್ಮದ ಗಂಧ ಹರಡಿ ಭಕ್ತರನ್ನು ಅನುಗ್ರಹಿಸುತ್ತಿದ್ದರು. ಎಲ್ಲ ದಾಸರ ಆರಾಧನೆಗಳನ್ನು ಶಿಷ್ಯರಿಂದ ಕೂಡಿ ಭವ್ಯವಾಗಿ ನಡೆಸಿಕೊಂಡು ಬರುತ್ತಿದ್ದರು, ಇವರ ಇಂತಹ ಕಾರ್ಯ ಹೀಗೆ ಮುಂದುವರಿಯಲೆOದು ಆಶಿಸುವೆ.

ಶ್ರೀ ಎನ್.ಡಿ.ಕುಲಕರ್ಣಿ
ಶ್ರೀ ಲಕ್ಷ್ಮೀಶವಿಠ್ಠಲದಾಸರು